ಪಕ್ಷದ ಒಬ್ಬ ಶಿಸ್ತಿನ ಕಾರ್ಯಕರ್ತ ಎಂದು ಹೇಳುವ ನಿಖಿಲ್ ಕುಮಾರಸ್ವಾಮಿ ತಾನ್ಯಾವತ್ತೂ ಸ್ಥಾನಮಾನಗಳಿಗಾಗಿ ಆಸೆ ಪಟ್ಟವನಲ್ಲ ಎನ್ನುತ್ತಾರೆ. ತನ್ನಂಥ ಸಾವಿರಾರು ಕಾರ್ಯಕರ್ತರನ್ನು ಹುಟ್ಟುಹಾಕುವ ಶಕ್ತಿ ಪಕ್ಷಕ್ಕಿದೆ, ಪಕ್ಷವನ್ನು ಕಟ್ಟಿ ಬೆಳೆಸಿದ ಹಲವಾರು ಹಿರಿಯ ನಾಯಕರಿದ್ದಾರೆ, ಪಕ್ಷದ ಹಿರಿಯರು ಯಾವುದೇ ನಿರ್ಣಯ ತೆಗೆದುಕೊಂಡರೂ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳುತ್ತಾರೆ.