ಶಕ್ತಿ ಯೋಜನೆ ಹಿನ್ನೆಲೆ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರದ್ದೇ ಹವಾ ಸೃಷ್ಟಿಯಾಗಿದ್ದು, ಬಸ್ ಏರಲು ಅವರ ನಡುವೆಯೇ ನೂಕುನುಗ್ಗಲು ನಡೆಯುತ್ತಿದೆ. ಮಹಿಳೆಯರ ನಡುವೆ ಬಸ್ ಏರಲು ಪುರುಷರಿಗೆ ಕಷ್ಟಸಾಧ್ಯವಾಗುತ್ತಿದೆ. ಹೀಗಾಗಿ ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ಪುರುಷ ಪ್ರಯಾಣಿಕರೊಬ್ಬರು ಕಿಟಕಿಯಿಂದ ಬಸ್ ಒಳಗೆ ಪ್ರವೇಶಿಸಿದ್ದಾರೆ.