ಲಕ್ನೋದ ಸೇತುವೆಯ ಕೆಳಗೆ ನಿಂತಿದ್ದ ಮಳೆನೀರಿನಲ್ಲಿ ಆಟವಾಡುತ್ತಿದ್ದ ಪುರುಷರು ಬೈಕ್ನಲ್ಲಿ ಹಿಂದೆ ಕುಳಿತಿದ್ದ ಯುವತಿಗೆ ರಸ್ತೆಯಲ್ಲಿ ನಿಂತ ಮಳೆನೀರು ಎರಚಿ ಕಿರುಕುಳ ನೀಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಹಗಲು ಹೊತ್ತಿನಲ್ಲಿಯೇ ಮಹಿಳೆಯೊಬ್ಬರಿಗೆ ಈ ರೀತಿ ನಡುರಸ್ತೆಯಲ್ಲಿ ಕಿರುಕುಳ ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.