ಬೀದರ್: ಕಲ್ಲಿನ ನಂದಿ ವಿಗ್ರಹಕ್ಕೆ ಹಾಲು ನೀರು ಕುಡಿಸುತ್ತಿರುವ ಜನರು; ವಿಡಿಯೋ ವೈರಲ್

ಬೀದರ್, ಜುಲೈ 28: ಜಿಲ್ಲೆಯ ಬಹುತೇಕ ದೇವಸ್ಥಾನಗಳಲ್ಲಿ ನಂದಿ ವಿಗ್ರಹ ನೀರು ಕುಡಿಯುವ ವದಂತಿ ಹಬ್ಬುತ್ತಿದೆ. ಬೀದರ್ ತಾಲೂಕಿನ ಧೊಮಸಾಪುರ ಮರಕುಂದ ಚಿಟಗುಪ್ಪಾ ತಾಲೂಕಿನ ನಿರ್ಣಾ, ಮಂಗಲಗಿ, ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಸೇರಿದಂತೆ ಹಲವೆಡೆ ಕಲ್ಲಿನ ನಂದಿ ವಿಗ್ರಹಕ್ಕೆ ಜನರು ಹಾಲು ಕುಡಿಸುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ನಂದಿ ವಿಗ್ರಹಗಳಿಗೆ ಚಮಚದಿಂದ ನೀರು ಹಾಲು ಕುಡಿಸಲು ಮಹಿಳಾ ಭಕ್ತರು ಮುಗಿ ಬೀಳುತ್ತಿದ್ದಾರೆ.