Bagalkote: ವಿದ್ಯಾರ್ಥಿಗಳ "ಹೆಬ್ಬುಲಿ" ಕಟಿಂಗ್ ಸೇರಿದಂತೆ ವಿಚಿತ್ರ ಹೇರ್ ಸ್ಟೈಲ್ ಗೆ ಬೇಸತ್ತ ಮುಖ್ಯ ಶಿಕ್ಷಕರೊಬ್ಬರು ಅಂತಹ ಕಟಿಂಗ್ ಮಾಡದಂತೆ ಸಲೂನ್ ಮಾಲೀಕರಿಗೆ ಪತ್ರ ಬರೆದಿದ್ದಾರೆ. ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ಕುಲಹಳ್ಳಿ ಸರಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಶಿವಾಜಿ ನಾಯಕ ಎಂಬ ಮುಖ್ಯ ಶಿಕ್ಷಕರು ಹೀಗೆ ಕುಲಹಳ್ಳಿ ಗ್ರಾಮದ ಸಲೂನ್ ಅಂಗಡಿಗಳಿಗೆ ಪತ್ರ ಬರೆದಿದ್ದಾರೆ