ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಬೇರೆ ಎಲ್ಲ ಸ್ಪರ್ಧಿಗಳಿಗಿಂತಲೂ ಡಿಫರೆಂಟ್ ಆಗಿ ಗುರುತಿಸಿಕೊಂಡಿದ್ದಾರೆ. ಫಿನಾಲೆಗೆ ಬರುವ ಸ್ಪರ್ಧಿಗಳ ಪೈಕಿ ಅವರು ಕೂಡ ಇದ್ದಾರೆ ಎಂಬುದು ಅನೇಕರ ಅಭಿಪ್ರಾಯ. ಅವರ ಜೊತೆ ಸಂಗೀತಾ ಶೃಂಗೇರಿ ಸ್ನೇಹ ಬೆಳೆಸಿದ್ದಾರೆ. ಆದರೆ ಇತ್ತೀಚೆಗೆ ಡ್ರೋನ್ ಪ್ರತಾಪ್ ಸೈಲೆಂಟ್ ಆಗಿದ್ದಾರೆ. ಅದರಿಂದ ಆಗುವ ಸಮಸ್ಯೆ ಏನು ಎಂಬುದನ್ನು ಸಂಗೀತಾ ವಿವರಿಸಿದ್ದಾರೆ. ‘ಮೂಲೆಯಲ್ಲಿ ಒಬ್ಬನೇ ಕುಳಿತುಕೊಳ್ಳಬೇಡ. ಎಲ್ಲರ ಜೊತೆಗೂ ಮಾತನಾಡು. ನಿನ್ನನ್ನು ನಗುತ್ತಾ ನೋಡಲು ನನಗೆ ಇಷ್ಟ. ಆದರೆ ನೀನು ಮಾತು ಆಡುವುದಿಲ್ಲ. ನನ್ನ ಮುಖವನ್ನು ಕೂಡ ನೀನು ನೋಡುತ್ತಿಲ್ಲ. ನಿನ್ನನ್ನು ನಾನು ಹೇಗೆ ನಗಿಸಿಲಿ’ ಎಂದು ಸಂಗೀತಾ ಶೃಂಗೇರಿ ಕೇಳಿದ್ದಾರೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಈ ಕಾರ್ಯಕ್ರಮವನ್ನು 24 ಗಂಟೆಯೂ ಉಚಿತವಾಗಿ ಲೈವ್ ನೋಡಬಹುದು. ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರತಿ ರಾತ್ರಿ 9.30ಕ್ಕೆ ಬಿಗ್ ಬಾಸ್ ಸಂಚಿಕೆ ಪ್ರಸಾರ ಆಗುತ್ತಿದೆ.