ಪಾತ್ರ ಯಾವುದೇ ಆಗಿದ್ದರೂ ಸಲೀಸಾಗಿ ನಿಭಾಯಸುವಷ್ಟು ಪ್ರತಿಭೆ ಮತ್ತು ಕ್ಷಮತೆ ಬ್ಯಾಂಕ್ ಜನಾರ್ಧನ ಅವರಲ್ಲಿತ್ತು, ಅಳುವ ಪಾತ್ರಗಳಿಗೂ ಸೈ ಅನಿಸಿಕೊಂಡಿದ್ದ ಅವರೊಂದಿಗೆ ನಟಿಸಲು ಅವಕಾಶ ಪಡೆದ ತಾವು ನಿಜಕ್ಕೂ ಅದೃಷ್ಟವಂತರು ಎಂದು ಭಾಗ್ಯಶ್ರೀ ಹೇಳಿದರು. ಸಂಭಾವನೆ ವಿಷಯದಲ್ಲಿ ಅವರಿಗೆ ಬೇಸರ ಉಂಟಾದ ಸಂದರ್ಭಗಳಿಗೆ, ಒಪ್ಪಂದಕ್ಕಿಂತ ಕಡಿಮೆ ಹಣ ಪಡೆದು ಅವರು ನೋವು ಅನುಭವಿಸಿದ್ದರು ಎಂದು ಅವರು ಹೇಳಿದರು.