ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರ ದಾಳಿ ಅತ್ಯಂತ ಭೀಕರವಾದದ್ದು ಮತ್ತು ಪುಲ್ವಾಮಾ ದಾಳಿ ನಂತರದಲ್ಲೇ ಅತಿದೊಡ್ಡದು. ಇದಕ್ಕೆ ಕಾರಣವಾದ ಉಗ್ರ ಸಂಘಟನೆ ವಿರುದ್ಧ ಕೇಂದ್ರ ಸರ್ಕಾರ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಗೃಹ ಸಚಿವ ಜಿ ಪರಮೇಶ್ವರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.