ಲಡಾಖ್ ಭೇಟಿಯ ವೇಳೆ ಬೈಕ್​ ಸವಾರಿ ಮಾಡಿದ ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಲಡಾಖ್ ಸ್ವಾಯತ್ತ ಹಿಲ್ ಡೆವಲಪ್‌ಮೆಂಟ್ ಕೌನ್ಸಿಲ್ -ಕಾರ್ಗಿಲ್ (ಎಲ್‌ಎಎಚ್‌ಡಿಸಿ-ಕಾರ್ಗಿಲ್) ಚುನಾವಣೆ ಅಂಗವಾಗಿ ಲಡಾಖ್ ಗೆ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಶನಿವಾರ ಅವರು ಪ್ಯಾಂಗೊಂಗ್ ಸರೋವರಕ್ಕೆ ಬೈಕ್​ ಪ್ರಯಾಣ ಮಾಡಿದರು. ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ತಮ್ಮ ಲಡಾಖ್‌ ಭೇಟಿ ಸಂದರ್ಭದ ಬೈಕ್ ರೈಡ್‌ನ 10 ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.