ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡುವುದು ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿತ್ತು. ಅದರೆ, ಅವರ ಬೇಕಾಬಿಟ್ಟಿ ಮತ್ತು ನಿರ್ಲಕ್ಷ್ಯ ಧೋರಣೆಯಿಂದ ಗೃಹಿಣಿಯರು ತಮ್ಮ ಕೈಗಳಲ್ಲಿ ಯಾತಕ್ಕೂ ಬಾರದ ಪೇಪರ್ ಪ್ಲೇಟ್ ಗಳನ್ನು ಹಿಡಿದುಕೊಂಡು ಅತ್ತಿಂದಿತ್ತ ಇತ್ತಿಂದತ್ತ ಓಡಾಡಿದರು. ಎಷ್ಟು ಜನಕ್ಕೆ ಊಟ ಸಿಕ್ಕಿತೋ ಗೊತ್ತಿಲ್ಲ. ದೂರದ ಹಳ್ಳಿಗಳಿಂದ ಮಹಿಳೆಯರು ಉಪವಾಸ ಇಲ್ಲವೇ ಅರೆಹೊಟ್ಟೆ ಆಹಾರ ಸೇವಿಸಿ ಹಿಂತಿರುಗಬೇಕಾಯಿತು.