ಮಂಗಳೂರಿನ ಕೆಎಸ್ ರಾವ್ ರಸ್ತೆಯಲ್ಲಿ ವಿವಿಧ ಕಸರತ್ತು ಪ್ರದರ್ಶಿಸುತ್ತಿದ್ದ ಹುಲಿವೇಷಧಾರಿಗಳ ತಂಡ ಮೆರವಣಿಗೆ ಹೋಗುತ್ತಿದ್ದಾಗ ವೇಷಧಾರಿಯೊಬ್ಬರು ಬೆಂಕಿ ಸಾಹಸ ಮಾಡಲು ಮುಂದಾಗಿದ್ದಾರೆ. ಹುಲಿ ವೇಷಧಾರಿ ಬಾಯಿಯಿಂದ ಬೆಂಕಿ ಉಗುಳುವ ಸಾಹಸ ಮಾಡುತ್ತಿದ್ದಂತೆಯೇ ಅವರ ಟೋಪಿಗೆ ಧಗ್ಗನೆ ಬೆಂಕಿಹೊತ್ತಿಕೊಂಡಿದೆ. ತಕ್ಷಣ ಅವರು ಟೋಪಿಯನ್ನು ಕಿತ್ತೆಸೆದು ಮೈಗೆ ಬೆಂಕಿ ತಗುಲದಂತೆ ನೋಡಿಕೊಂಡಿದ್ದಾರೆ.