ಅಣ್ಣಾವ್ರ ಹಾಡನ್ನು ಹಾಡಲು ಪ್ರಯತ್ನಿಸಿದ ಮಲಯಾಳಂ ನಟ ಮೋಹನ್ಲಾಲ್; ಇಲ್ಲಿದೆ ವಿಡಿಯೋ

ಮೋಹನ್ಲಾಲ್ ಅವರು ಮಲಯಾಳಂನ ಸೂಪರ್ ಸ್ಟಾರ್. ಅವರಿಗೆ ವರನಟ ಡಾ. ರಾಜ್ಕುಮಾರ್ ಜೊತೆ ಒಳ್ಳೆಯ ಬಾಂಧವ್ಯ ಇತ್ತು. ಇದಕ್ಕೆ ಸಾಕ್ಷಿ ಎಂಬಂತೆ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮೋಹನ್ಲಾಲ್ ಅವರು ರಾಜ್ಕುಮಾರ್ ನಟನೆಯ ‘ಎರಡು ಕನಸು’ ಸಿನಿಮಾದ ‘ಎಂದೆಂದೂ ನಿನ್ನನು ಮರೆತು..’ ಹಾಡನ್ನು ಹಾಡಲು ಪ್ರಯತ್ನಿಸಿದ್ದಾರೆ. ಸದ್ಯ ಈ ವಿಡಿಯೋ ಟಿವಿ9 ಕನ್ನಡಕ್ಕೆ ಲಭ್ಯವಾಗಿದೆ. ಮೋಹನ್ಲಾಲ್ ಅವರು ಮಲಯಾಳಂನಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರಿಗೆ ಕನ್ನಡದಲ್ಲೂ ಅಭಿಮಾನಿಗಳು ಇದ್ದಾರೆ. ಮೇ 21ರಂದು ಮೋಹನ್ಲಾಲ್ ಜನ್ಮದಿನ. ಅವರಿಗೆ ಎಲ್ಲರೂ ಅಡ್ವಾನ್ಸ್ ಆಗಿ ಶುಭಾಶಯ ತಿಳಿಸುತ್ತಿದ್ದಾರೆ.