ಆಟೋರಿಕ್ಷಾ ಚಾಲಕ ಮತ್ತು ಪ್ರತಿಭಟನಾಕಾರ ನಡುವೆ ಒಬ್ಬ ಟ್ರಾಫಿಕ್ ಪೊಲೀಸ್ ಕಾಣಿಸುತ್ತಾರೆ, ಆದರೆ ಅವರು ಮೂಕ ಪ್ರೇಕ್ಷಕ ಮಾತ್ರ. ಒಂದು ಪಕ್ಷ ಆಟೋರಿಕ್ಷಾದವನು ಪ್ರತಿಭಟನೆಕಾರರ ಕೈಗೆ ಸಿಕ್ಕಿದ್ದರೂ ಪೊಲೀಸ್ ಏನೂ ಮಾಡುತ್ತಿರಲಿಲ್ಲ. ಪ್ರತಿಭಟನೆಕಾರರು ನಂತರ ತಮ್ಮ ಬಲಭಾಗಕ್ಕೆ ತಿರುಗಿ ಅಲ್ಲಿ ಓಪನ್ ಇದ್ದ ಕೆಲವು ಅಂಗಡಿ ಮುಂಗಟ್ಟು ಮತ್ತು ಒಂದು ಲಾಡ್ಜ್ ಅನ್ನು ಮುಚ್ಚಿಸುತ್ತಾರೆ.