ಗ್ರಾಮದಲ್ಲಿ ಒಂಟಿ ಸಲಗ

ರಾತ್ರಿ ಸುಮಾರು ಹನ್ನೊಂದೂವರೆ ಗಂಟೆಗೆ ಊರ ಜನರೆಲ್ಲ ಆತಂಕದಲ್ಲೇ ನಿದ್ರೆಗೆ ಶರಣಾದಾಗ ಸಲಗವು ಊರಿನ ಕಾವಲುಗಾರನ ಹಾಗೆ ಗಸ್ತು ತಿರುಗಲಾರಂಭಿಸಿದೆ. ಆನೆಯ ಎದುರುಗಡೆಯಿಂದ ಬೈಕ್ ಸವಾರ ವೇಗದಿಂದ ಊರೊಳಗೆ ಬರುವುದು ಕೆಮೆರಾದಲ್ಲಿ ಸೆರೆಯಾಗಿದೆ. ಆನೆಯನ್ನು ಕಂಡಾಕ್ಷಣ ಅವನು ಬೈಕನ್ನು ಪಕ್ಕದ ರಸ್ತೆ ಕಡೆ ತಿರುಗಿಸಿ ಮಾಯವಾಗುತ್ತಾನೆ.