ನಟ ಚಿರಂಜೀವಿ ಅವರಿಗೆ ಮೇ 9ರಂದು ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅವಾರ್ಡ್ ನೀಡಿದ್ದಾರೆ. ಆ ಬಳಿಕ ಔತಣಕೂಟ ಏರ್ಪಡಿಸಲಾಗಿತ್ತು. ಚಿರಂಜೀವಿ ಜೊತೆಗೆ ಪತ್ನಿ ಸುರೇಖಾ, ಮಗ ರಾಮ್ ಚರಣ್, ಸೊಸೆ ಉಪಾಸನಾ ಕೊನಿಡೆಲಾ ಕೂಡ ಈ ಔತಣಕೂಟದಲ್ಲಿ ಭಾಗಿ ಆಗಿದ್ದರು. ಚಿತ್ರರಂಗಕ್ಕೆ ಚಿರಂಜೀವಿ ಅವರು ನೀಡಿದ ಕೊಡುಗೆ ಆಧರಿಸಿ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಗಿದೆ. ಇದು ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಖುಷಿ ನೀಡಿದೆ. ಚಿರಂಜೀವಿ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಕೆಲವು ವರ್ಷ ರಾಜಕೀಯದಲ್ಲಿಯೂ ಇದ್ದರು. ಆ ಬಳಿಕ ರಾಜಕೀಯ ತೊರೆದರು.