Viral Video: ಪ್ರತಿಭೆ ಯಾರಪ್ಪನ ಮನೆ ಆಸ್ತಿಯೂ ಅಲ್ಲ! ನೋಡದೆಯೇ, ಎರಡೂ ಕೈಗಳನ್ನು ಬೆನ್ನಿಗೆ ಮಾಡಿಕೊಂಡು ಆಂಜನೇಯ ಸ್ವಾಮಿಯ ಸುಂದರ ಚಿತ್ರ ಬಿಡಿಸಿದ ಮಹಿಳೆ! ಶರಣು ಶರಣು ಜಗತ್ತಿನಲ್ಲಿ ಎಂತೆಂಥಾ ಕೌಶಲ್ಯದ ಕಲಾವಿದರಿದ್ದಾರೆ! ಅದಕ್ಕೇ ಹೇಳಿದ್ದು ಪ್ರತಿಭೆ ಯಾರಪ್ಪನ ಮನೆ ಆಸ್ತಿಯೂ ಅಲ್ಲ! ಕೆಲವರು ತಮ್ಮ ಕಲಾತ್ಮಕ ಕೌಶಲ್ಯದಿಂದ ಸುಂದರವಾದ ಚಿತ್ರಗಳನ್ನು ರಚಿಸುತ್ತಾರೆ. ಈ ಕಲಾವಿದರ ಪ್ರತಿಭೆ ನೋಡಿದವರು ವಾವ್ ಎನ್ನದೇ ಇರಲಾರರು. ಆದರೆ ಹೆಚ್ಚಿನ ಕಲಾತ್ಮಕ ಪ್ರತಿಭೆಯು ನಗರ ಅಥವಾ ಸುಶಿಕ್ಷಿತರಲ್ಲಿದೆ ಎಂದು ಹಲವರು ಭಾವಿಸುತ್ತಾರೆ. ಆದರೆ ಈ ನೆಲದ ಮಣ್ಣಿನಲ್ಲಿರುವ ಮಾಣಿಕ್ಯಗಳು ಸಹ ಆಗಾಗ ಬೆಳಕಿಗೆ ಬರುತ್ತವೆ. ಗ್ರಾಮೀಣ ಮಹಿಳೆಯರೂ ಕೆಲವು ವಿಶೇಷ ಕೌಶಲ್ಯಗಳನ್ನು ಹೊಂದಿರುತ್ತಾರೆ. ಇದು ಅನೇಕ ಬಾರಿ ಸಾಬೀತಾಗಿದೆ. ಬೆರಣಿ ತಟ್ಟುವುದು, ತಲೆಯ ಬಿಂದಿಗೆ ಮೇಲೆ ಬಿಂದಿಗೆ ಹೊತ್ತು ನಡೆಯುವುದು, ವರ್ಣರಂಜಿತ ರಂಗೋಲಿ ಬಿಡಿಸುವುದು... ಹೀಗೇ ವಿವಿಧ ಕೌಶಲ್ಯ ಹೊಂದಿರುವ ಮಹಿಳೆಯರ ವಿಡಿಯೋಗಳು ಇಂಟರ್ ನೆಟ್‌ನಲ್ಲಿ ಆಗಾಗ ಸದ್ದು ಮಾಡುತ್ತವೆ. ಆದರೆ ಇದೀಗ ಗ್ರಾಮೀಣ ಮಹಿಳೆಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಆ ಮಹಿಳೆಯ ಪ್ರತಿಭೆ ನೋಡಿ ವ್ಹಾವ್ ಎನ್ನದವರೇ ಇಲ್ಲ.. ಹೊಗಳಿಕೆಯ ಸುರಿಮಳೆ ಮಾಡದವರೇ ಇಲ್ಲ.. ಹಾಗಾದರೆ ಈ ಅದ್ಭುತ ವಿಡಿಯೋದಲ್ಲಿ ಅಂಥದ್ದೇನಿದೆ!?