ಕರ್ನಾಟಕದಲ್ಲಿ ಚುನಾವಣೆಗೆ ದಿನಗಣನೆ ಆರಂಭ ಆಗಿದೆ. ಹೀಗಾಗಿ, ರಾಷ್ಟ್ರ ನಾಯಕರು ರಾಜ್ಯಕ್ಕೆ ಬಂದು ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ಮೇ 5) ತುಮಕೂರಿಗೆ ಬಂದಿದ್ದರು. ಅಲ್ಲಿ ಅಬ್ಬರದ ಪ್ರಚಾರ ಮಾಡಿದ್ದಾರೆ. ಸರ್ಕಾರಿ ಕಾಲೇಜು ಮೈದಾನದಲ್ಲಿ ಬಿಜೆಪಿ ಸಮಾವೇಶ ನಡೆದಿದೆ. ವೇದಿಕೆ ಮೇಲೆ ಪ್ರಧಾನಿ ಮೋದಿ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್ ಮುಖಾಮುಖಿ ಆದರು. ಜಗ್ಗೇಶ್ ಅವರನ್ನು ಮೋದಿ ಬೆನ್ನುತಟ್ಟಿ ಮಾತನಾಡಿಸಿದರು. ಈ ವೇಳೆ ಜಗ್ಗೇಶ್ ಖುಷಿ ಆದರು.