ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಿಸಿದರು. ಈ ವೇಳೆ ಕೇಜ್ರಿವಾಲ್ ಕುರಿತು ಟೀಕೆ ಮಾಡಿದ ಮೋದಿ, ಕೆಲವು ರಾಜಕೀಯ ನಾಯಕರು ಮನೆಯಲ್ಲಿ ಜಕುಝಿ ಮತ್ತು ಸ್ಟೈಲಿಶ್ ಶವರ್‌ಗಳ ಮೇಲೆ ಕೇಂದ್ರೀಕರಿಸುತ್ತಾರೆ ಎಂದಿದ್ದಾರೆ. ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಲೋಕಸಭೆಯಲ್ಲಿ ನೀಡಿದ ಉತ್ತರದಲ್ಲಿ, ರಾಷ್ಟ್ರಪತಿಗಳು ಮುಂಬರುವ 25 ವರ್ಷಗಳ ಬಗ್ಗೆ ಜನರಲ್ಲಿ ವಿಶ್ವಾಸವನ್ನು ಬೆಳೆಸುವ ಬಗ್ಗೆ ಮಾತನಾಡಿದರು ಎಂದು ಪ್ರಧಾನಿ ಮೋದಿ ಹೇಳಿದರು.