ಸಚಿವನಾಗಿ ನಾನೇ ಇನ್ನೂ ಲೋಕಸಭೆಗೆ ಹೋಗಲು ಆಗಿಲ್ಲ - ಸಚಿವ ಜಮೀರ್ ಅಹ್ಮದ್

ಹುಬ್ಬಳ್ಳಿ, ಡಿಸೆಂಬರ್​ 15: ಸಂತಸ್ ಭವನದಲ್ಲಿ ಸ್ಮೋಕ್ ಬಾಂಬ್ (Smoke bomb)​ ದಾಳಿ ವಿಚಾರವಾಗಿ ಧಾರವಾಡದಲ್ಲಿ ಸಚಿವ ಜಮೀರ್ ಅಹ್ಮದ್ (Minister BZ Zameer Ahmed Khan) ತಿರುಗೇಟು ನೀಡಿದ್ದಾರೆ. ಇದು ಕಾಂಗ್ರೆಸ್ ಕುತಂತ್ರ ಅಂತಾ ಆರೋಪಗಳ ಬಗ್ಗೆ ಮಾತನಾಡಟಿದ ಅವರು ಇದರಲ್ಲಿ ಕಾಂಗ್ರೆಸ್ ಕುತಂತ್ರ ಹೇಗಿರುತ್ತೆ? ಅವರಿಗೆ ಪಾಸ್ ಕೊಟ್ಟವರು ಯಾರು? ಇದರಲ್ಲಿ ರಾಜಕೀಯ ಮಾತನಾಡಲು ನಾನು ಇಷ್ಟಪಡುವುದಿಲ್ಲ. ಇದರಲ್ಲಿ‌ ಭದ್ರತಾ ವೈಫಲ್ಯ ಆಗಿದೆ. ಆತ ಪ್ರೇಕ್ಷಕರ ಗ್ಯಾಲರಿ ಮೇಲಿಂದ ಜಂಪ್ ಹೊಡೆದಿದ್ದಾರೆ. ಹೀಗಾದರೆ ಸೆಕ್ಯೂರಿಟಿ ವ್ಯವಸ್ಥೆ ಹೇಗಿದೆ ಅಲ್ಲಿ? ಸಂಸತ್‌ನಲ್ಲಿ (parliament house) ಒಳಗೆ ಹೋಗಲು ಹತ್ತಾರು ಪ್ರಕ್ರಿಯೆ ಇದೆ. ಮಂತ್ರಿ, ಎಂಎಲ್‌ಗಳು ಸಂಸತ್‌ಗೆ ಹೋಗಲು ಅನೇಕ ಪ್ರಕ್ರಿಯೆ ಇವೆ. ಹಾಗಾದರೆ ಆ ಹುಡುಗರು ಹೇಗೆ ಒಳಗೆ ಹೋದರು? ರಾಜ್ಯದ ಮುಖ್ಯಮಂತ್ರಿಗಳೇ ಪ್ರಧಾನಿ ಭೇಟಿಯಾಗಬೇಕಾದರೂ ಅನೇಕ ಪ್ರಕ್ರಿಯೆ ಇವೆ. ಸಚಿವನಾಗಿ ನಾನೇ ಇನ್ನೂ ಲೋಕಸಭೆಗೆ ಹೋಗಲು ಆಗಿಲ್ಲ. ಹಾಗಾದರೆ ಇವರು ಹೇಗೆ ಹೋದರು? ಅಂತಾ ಅವರು ಪ್ರಶ್ನಿಸಿದ್ದಾರೆ.