ಶಶಾಂಕ್ ನಿರ್ದೇಶಿಸಿ ಡಾರ್ಲಿಂಗ್ ಕೃಷ್ಣ ನಟಿಸಿರುವ 'ಕೌಸಲ್ಯ ಸುಪ್ರಜಾ ರಾಮ' ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದೆ. ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ನಟ ಡಾರ್ಲಿಂಗ್ ಕೃಷ್ಣ, ''ಇದು ನನ್ನ ಈವರೆಗಿನ ವೃತ್ತಿ ಜೀವನದಲ್ಲಿಯೇ ಅತ್ಯುತ್ತಮ ಸಿನಿಮಾ. ಇಂಥಹಾ ಅತ್ಯುತ್ತಮ ನರೇಶನ್ ಅನ್ನು ಈವರೆಗೆ ನಾನು ಕೇಳಿರಲೇ ಇಲ್ಲ'' ಎಂದರು. ಯಾಕೆ ಈ ಸಿನಿಮಾ ತಮಗೆ ಇಷ್ಟು ವಿಶೇಷ ಎಂಬುದನ್ನೂ ವಿವರಣೆ ನೀಡಿದ್ದಾರೆ.