ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ಹತ್ತಾರು ಅತಿಥಿಗಳು; ಇವರೆಲ್ಲ ಯಾರು?

‘ಬಿಗ್ ಬಾಸ್ ಕನ್ನಡ ಸೀಸನ್ 10’ರ ರಂಗು ಎರಡೇ ವಾರದಲ್ಲಿ ಹೆಚ್ಚಾಗಿದೆ. ಎಲ್ಲರೂ ಮನೆಯಲ್ಲಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟ ಬಳಿಕ ಹೊರ ಜಗತ್ತಿನ ಜೊತೆ ಸಂಪರ್ಕ ಕಳೆದುಕೊಳ್ಳುತ್ತಾರೆ. ಅಪರೂಪಕ್ಕೊಮ್ಮೆ ಬಿಗ್ ಬಾಸ್ ಮನೆ ಒಳಗೆ ಅತಿಥಿಗಳ ಆಗಮನ ಆಗುತ್ತದೆ. ಈಗ ಏಕಾಏಕಿ ಹತ್ತಾರು ಮಂದಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಅಷ್ಟಕ್ಕೂ ಇವರೆಲ್ಲ ಯಾರು? ‘ಬೃಂದಾವನ’ ಟೀಂ. ಕಲರ್ಸ್ ಕನ್ನಡದಲ್ಲಿ ‘ಬೃಂದಾವನ’ ಹೆಸರಿನ ಹೊಸ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ತಂಡದವರು ಪ್ರಮೋಷನ್​ಗೆ ತಂಡ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಈ ಸೀರಿಯಲ್​ನ ರಾಮ್​ ಜಿ ನಿರ್ದೇಶನ ಮಾಡುತ್ತಿದ್ದಾರೆ. ಅಕ್ಟೋಬರ್ 23ರಿಂದ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಧಾರಾವಾಹಿ ಪ್ರಸಾರ ಕಾಣುತ್ತದೆ. ಪ್ರತಿನಿತ್ಯದ ಸಂಚಿಕೆಯನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9:30ಕ್ಕೆ ವೀಕ್ಷಿಸಬಹುದು. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ನೋಡಲು ಅವಕಾಶ ಇದೆ.