ರಾಜ್ಕುಮಾರ್ ಆರಂಭಿಸಿದ ಶಕ್ತಿಧಾಮದ ಉಸ್ತುವಾರಿ ಶಿವಣ್ಣ ಹಾಗೂ ಗೀತಾ ಶಿವರಾಜ್ಕುಮಾರ್ ಅವರ ಹೆಗಲೇರಿದೆ. ಹೀಗಾಗಿ ಶಿವರಾಜ್ಕುಮಾರ್ ಅವರು ಆಗಾಗ ಅಲ್ಲಿಗೆ ತೆರಳುತ್ತಾರೆ. ಇಂದು (ಆಗಸ್ಟ್ 15) ಅವರು ಮೈಸೂರಿಗೆ ತೆರಳಿದ್ದಾರೆ. ಶಕ್ತಿಧಾಮದ ಮಕ್ಕಳ ಜೊತೆ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ್ದಾರೆ. ಧ್ವಜಾರೋಹಣ ಮಾಡಿ ಮಕ್ಕಳ ಜೊತೆ ಸಂಭ್ರಮಿಸಿದ್ದಾರೆ. ಧ್ವಜಾರೋಹಣದ ಬಳಿಕ ಮಕ್ಕಳಿಗೆ ಸಿಹಿ ವಿತರಿಸಲಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಶಿವರಾಜ್ಕುಮಾರ್ ಅವರು ರಜನಿಕಾಂತ್ ಜೊತೆ ನಟಿಸಿದ ‘ಜೈಲರ್’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.