ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದ ಮಹಿಳೆಯರು!

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಕಾಡಅಂಕನಹಳ್ಳಿ ಗ್ರಾಮದಲ್ಲಿ ಎಂದಿನಂತೆಯೇ ಮಹಿಳೆಯರು ಡೈರಿಗೆ ಹಾಲು ತಂದಿದ್ದಾರೆ. ಆದರೆ, ಡೈರಿಯಲ್ಲಿ ಹಾಲು ಖರೀದಿಸಿಲ್ಲ. ಸಚಿವ ಚಲುವರಾಯಸ್ವಾಮಿ ದ್ವೇಷದಿಂದ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿ ಮಹಿಳೆಯರು ಹಾಲನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದಾರೆ.