ಮರದ ಮೇಲೆ ಅವಿತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಾರ್ಗದ್ದೆ ಗ್ರಾಮದ ಕಾಫಿತೋಟದ ಮರದಲ್ಲಿ ಅವಿತಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಕೋಲಿನ ಸಹಾಯ ಪಡೆದು ಉರುಗ ತಜ್ಞ ಸ್ನೇಕ್ ರಿಜ್ವಾನ್​ ಸೆರೆಹಿಡಿದಿದ್ದಾರೆ. ಮರದ ಮೇಲಿದ್ದ ಕಾಳಿಂಗ ಸರ್ಪ ಕಂಡು ಕಾಫಿ ತೋಟದ ಕಾರ್ಮಿಕರು ಆತಂಕಗೊಂಡಿದ್ದರು.