ಮಾದಾವರ ಸುತ್ತಮುತ್ತ ಟ್ರಾಫಿಕ್​ಜಾಮ್

ಬುಕ್ ಮೈ ಶೋ ಆಯೋಜಿಸಿದ್ದ ಎಡ್ ಶೆರಾನ್ ಅವರ ಅಂತರಾಷ್ಟ್ರೀಯ ಸಂಗೀತ ಕಾರ್ಯಕ್ರಮ ನೆಲಮಂಗಲದ ಬಿಐಇಸಿ ಮಾದಾವರ ಮೈದಾನದಲ್ಲಿ ನಡೆಯಿತು. 20,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರಿಂದ ಮಾದಾವರದ ಸುತ್ತಮುತ್ತ ಭಾರಿ ಸಂಚಾರ ದಟ್ಟಣೆ ಉಂಟಾಯಿತು. ಪೊಲೀಸರು ಸಂಚಾರ ನಿಯಂತ್ರಿಸಲು ಹರಸಾಹಸ ಪಟ್ಟರು. ಸಾವಿರಾರು ವಾಹನಗಳು ಸಿಲುಕಿಕೊಂಡವು.