ಬೈಕ್​ನಲ್ಲಿ ತೆರಳುತ್ತಿದ್ದ ಹಾಲು ವ್ಯಾಪಾರಿಗೆ ಡಿಕ್ಕಿ ಹೊಡೆದ ಚಿರತೆ

ಒಂದು ಕಡೆ ಚಿರತೆ ರಸ್ತೆ ದಾಟುತ್ತಿತ್ತು, ಇನ್ನೊಂದು ಕಡೆ ಹಾಲು ವ್ಯಾಪಾರಿ ಬೈಕ್​ನಲ್ಲಿ ಬರುತ್ತಿದ್ದರು, ಈ ವೇಳೆ ಚಿರತೆ ಬೈಕ್​ಗೆ ಡಿಕ್ಕಿ ಹೊಡೆದಿರುವ ಘಟನೆ ಉದಯಪುರದಲ್ಲಿ ನಡೆದಿದೆ. ರಾತ್ರಿ 8 ಗಂಟೆ ಸುಮಾರಿಗೆ ಶಿಲ್ಪಗ್ರಾಮ ಮುಖ್ಯ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಹಾಲು ವ್ಯಾಪಾರಿ, ಚಿರತೆ ಇಬ್ಬರೂ ಗಾಯಗೊಂಡಿದ್ದಾರೆ.