ಸುರಕ್ಷತೆ ಅನಿವಾರ್ಯತೆ, ಯುವತಿಯರಿಗಾಗಿ ಟೈಲ್ಸ್ ಬ್ರೇಕಿಂಗ್ ವಿಧಾನ ತರಬೇತಿ

ನಗರದಲ್ಲಿ ಮಹಿಳೆಯರು ಸುರಕ್ಷತಾ ಕ್ರಮಗಳನ್ನ ಹೆಚ್ಚಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ದೇಶದ ಅತಿ ದೊಡ್ಡ ಕರಾಟೆ ಶಾಲೆ ಎನ್ನಿಸಿಕೊಂಡಿರುವ ಓಎಸ್ ಕೆ ಫೆಡೇರೇಷನ್ ಆಫ್ ಇಂಡಿಯಾ 50ಕ್ಕೂ ಹೆಚ್ಚು ಮಹಿಳೆಯರಿಗೆ ಕರಾಟೆ ಮೂಲಕ ಸುರಕ್ಷತಾ ಆಯಾಮಗಳ ತರಬೇತಿ ನೀಡಿದೆ. ಅಂತಾರಾಷ್ಟ್ರೀಯ ಮಹಿಳಾ ದಿನ ಸಂದರ್ಭದಲ್ಲಿ (International Women's Day) ಈ ತರಬೇತಿ ಏರ್ಪಡಿಸಿದ್ದು ವಿಶೇಷವಾಗಿತ್ತು.