BBMP survey for castration of Stray Dogs: ಪಾರ್ಕ್ ನಲ್ಲೂ ನಾಯಿ ಕಾಟ.. ಬೀದಿಯಲ್ಲೂ ಶ್ವಾನಗಳ ಹಾವಾಳಿ. ಬೀದಿನಾಯಿಗಳ ಈ ಉಪಟಳಕ್ಕೆ ಬೆಂಗಳೂರಿಗರು ಬೆದರಿ ಹೋಗಿದ್ದಾರೆ. ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಿರೋ ಈ ಸಂತತಿಯ ವೇಗ ಕಡಿಮೆ ಮಾಡಲು ಪಾಲಿಕೆ ಮುಂದಾಗಿದೆ. ಈಗಾಗಲೇ ನಾಯಿಗಣತಿ ಆರಂಭ ಆಗಿದ್ದು, ಗಣತಿ ಬಳಿಕ ಸಂತಾನಶಕ್ತಿ ಹರಣ (castration) ಶುರುವಾಗಿದೆ. ಒಟ್ಟು 50 ಟೀಮ್ಗಳನ್ನು ಮಾಡಲಾಗಿದ್ದು ಒಂದು ಟೀಮ್‌ನಲ್ಲಿ ಇಬ್ಬರು ಸಮೀಕ್ಷಾದಾರರು ಇದ್ದು, ಮೇಲ್ವಿಚಾರಣೆಗಾಗಿ 15 ಮೇಲ್ವಿಚಾರಕರನ್ನು ನಿಯೋಜನೆ ಮಾಡಲಾಗಿದೆ. ಈ ಹಿಂದೆ 2019 ರಲ್ಲಿ ಸಮೀಕ್ಷೆ ಮಾಡಿ ಸಂತಾನಹರಣ ಚಿಕಿತ್ಸೆ ನೀಡಿದ್ದು, ಈ ಕಾರ್ಯಕ್ರಮ ಯಶಸ್ವಿ ಅನುಷ್ಟಾನದ ಬಗ್ಗೆ ತಿಳಿಯುವ ಸಲುವಾಗಿ ಬೀದಿನಾಯಿಗಳ ಸಮೀಕ್ಷೆಯ ಕಾರ್ಯ ಪ್ರಾರಂಭವಾಗಿದೆ. 2019 ನೇ ಸಾಲಿನಲ್ಲಿ ಬಿಬಿಎಂಪಿಯಿಂದ ನಡೆದ ಸಮೀಕ್ಷೆಯಲ್ಲಿ ಸುಮಾರು 3.10 ಲಕ್ಷ ಬೀದಿ ನಾಯಿಗಳಿವೆ.