ಹೆಚ್ ಡಿ ಕುಮಾರಸ್ವಾಮಿ ಹೆಣ್ಣುಮಕ್ಕಳ ಬಗ್ಗೆ ಹಗುರವಾಗಿ ಮಾತಾಡಿರುವುದನ್ನು ಪ್ರಸ್ತಾಪಿಸಿದ ಚಲುವರಾಯಸ್ವಾಮಿ, ಅವರು ಬಳಸಿರುವ ಭಾಷೆ ಸಂಸ್ಕಾರವಂತರು ಬಳಸುವ ಭಾಷೆ ಅಲ್ಲ, ಹಿಂದೆ ಒಬ್ಬ ರೈತಮಹಿಳೆಯ ಬಗ್ಗೆಯೂ ಅವರು ಅವಹೇಳನಕಾರಿಯಾಗಿ ಮಾತಾಡಿದ್ದರು, ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಹೀಗೆ ಸಂಸ್ಕಾರಹೀನರಾಗಿ ಮಾತಾಡುವುದು ಎಷ್ಟರಮಟ್ಟಿಗೆ ಸರಿ ಅನ್ನೋದನ್ನು ಅವರೇ ಯೋಚನೆ ಮಾಡಬೇಕು ಎಂದು ಹೇಳಿದರು.