ಎನ್ ಡಿಎ ಮೈತ್ರಿಕೂಟದ ಎಲ್ಲ ಪಕ್ಷಗಳ ಸಭೆಯನ್ನು ಕರೆಯಲಾಗಿದೆ, ಅದರಲ್ಲಿ ಪಾಲ್ಗೊಳ್ಳಲು ಹೋಗುತ್ತಿರುವುದಾಗಿ ವಿಮಾನ ನಿಲ್ದಾಣ ತಲುಪುವ ಧಾವಂತದಲ್ಲಿದ್ದ ಕುಮಾರಸ್ವಾಮಿ ಹೇಳಿದರು. ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಸರ್ಕಾರ ರಚಿಸಲು ಕಸರತ್ತು ನಡೆಸಿರುವ ಬಗ್ಗೆ ನಮ್ಮ ವರದಿಗಾರ ಹೇಳಿದಾಗ, ಅದು ಸಾಧ್ಯವಾಗಲ್ಲ, ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಸರ್ಕಾರವೇ ರಚನೆಯಾಗೋದು ಅಂತ ಹೇಳಿದರು.