‘ಬ್ಲೌಸ್​ ಬಗ್ಗೆ ಸಿನಿಮಾ ಅಂದ್ರೆ ಅಸಹ್ಯ ಅಲ್ಲ’; ‘ರವಿಕೆ ಪ್ರಸಂಗ’ ಚಿತ್ರದ ಬಗ್ಗೆ ಗೀತಾ ಭಾರತಿ ಭಟ್​ ಮಾತು

‘ರವಿಕೆ ಪ್ರಸಂಗ’ ಚಿತ್ರದಲ್ಲಿ ನಟಿ ಗೀತಾ ಭಾರತಿ ಭಟ್, ಸಂಪತ್ ಮೈತ್ರೇಯ ಮುಂತಾದವರು ಅಭಿನಯಿಸಿದ್ದಾರೆ. ಮಹಿಳೆಯರು ಧರಿಸುವ ಬ್ಲೌಸ್​ ಕುರಿತಾಗಿಯೇ ಈ ಸಿನಿಮಾದ ಕಥೆ ಇದೆ. ಹಾಗೆಂದ ಮಾತ್ರಕ್ಕೆ ಈ ಚಿತ್ರ ಅಸಹ್ಯವಾಗಿಲ್ಲ ಎಂದು ಗೀತಾ ಭಾರತಿ ಭಟ್​ ಹೇಳಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟೈಟಲ್​ ಸಾಂಗ್​ ಬಿಡುಗಡೆ ಆಯಿತು. ಈ ವೇಳೆ ವೇದಿಕೆಯಲ್ಲಿ ಮಾತನಾಡಿದ ಅವರು, ‘ಇದೇ ಮೊದಲ ಬಾರಿ ನಾನು ಸಿನಿಮಾಗಾಗಿ ಡ್ಯಾನ್ಸ್​ ಮಾಡಿದ್ದೇನೆ. ರವಿಕೆ ಕುರಿತು ವಿಭಿನ್ನವಾಗಿ ಸಿನಿಮಾ ಮಾಡಲಾಗಿದೆ. ಇದು ಒಂದು ಸೂಕ್ಷ್ಮವಾದ ವಿಚಾರ. ಅದನ್ನು ಎಲ್ಲಿಯೂ ಅಸಹ್ಯ ಎನಿಸಿದ ರೀತಿಯಲ್ಲಿ ತುಂಬ ಚೆನ್ನಾಗಿ ಸಿನಿಮಾ ಮಾಡಿದ್ದೇವೆ’ ಎಂದು ಹೇಳಿದ್ದಾರೆ. ಸಂತೋಷ್ ಕೊಡೆಂಕೆರಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ.