ಪುಟಾಣಿ ಆದ್ಯವೀರ್ ಗೆ ಪೂಜೆಯ ಪ್ರತಿಯೊಂದು ಆಯಾಮದ ಬಗ್ಗೆ ತೀವ್ರ ಕುತೂಹಲ. ತನಗೆ ಗೊತ್ತಾಗದ ಸಂಗತಿಗಳನ್ನು ಅವನು ಅಜ್ಜಿಯಿಂದ ಕೇಳಿ ತಿಳಿದುಕೊಳ್ಳುತ್ತಿದ್ದಾನೆ. ಪ್ರಮೋದಾ ದೇವಿಯವರು ಮೊಮ್ಮಗನ ಪ್ರಶ್ನೆಗಳಿಗೆ ಉತ್ತರ ಹೇಳುತ್ತಾ ತ್ರಿಷಿಕಾ ಜೊತೆ ಗಹನವಾದ ಚರ್ಚೆ ನಡೆಸುತ್ತಿದ್ದಾರೆ. ರಾಜಮಾತೆ ಹೇಳುವುದನ್ನು ತ್ರಿಷಿಕಾ ಆಸ್ಥೆಯಿಂದ ಕೇಳಿಸಿಕೊಳ್ಳುತ್ತಾರೆ.