ಪರಮೇಶ್ವರ್‌ಗೆ ಹಾಕೋದಕ್ಕೂ ಮೊದಲೇ ಹರಿದು ಬಿದ್ದ ಹಾರ

ಚುನಾವಣೆಗೂ ಮುನ್ನ ಮಾಜಿ ಡಿಸಿಎಮ್ ಪರಮೇಶ್ವರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಕೊರಟಗೆರೆಯಲ್ಲಿ ಪ್ರಜಾಧ್ವನಿ ಯಾತ್ರೆ ಮಾಡಿದ್ದಾರೆ. ಆದ್ರೆ ಈ ವೇಳೆ ಕಾರ್ಯಕರ್ತರು, ಅಭಿಮಾನಿಗಳು ಕ್ರೇನ್‌ ಮೂಲಕ ಹಣ್ಣಿನ ಹಾರ ಹಾಕುವಾಗ ಬೃಹತ್‌ ಹಾರ ಹರಿದು ಬಿದ್ದಿದೆ. ಅದೃಷ್ಟವಶಾತ್‌ ಪರಮೇಶ್ವರ್‌ ಅವರಿಂದ ಕೆಲವೇ ಅಡಿಗಳಷ್ಟು ದೂರದಲ್ಲಿ ಹಾರ ಹರಿದುಬಿದ್ದಿರೋದ್ರಿಂದ ಪರಮೇಶ್ವರ್‌ಗೆ ಏನೂ ಆಗಿಲ್ಲ.