ಪುಣೆಯಲ್ಲಿ ನಡೆಯುತ್ತಿರುವ ಭಾರತ-ನ್ಯೂಜಿಲೆಂಡ್ ಟೆಸ್ಟ್ ಪಂದ್ಯದಲ್ಲಿ ರಿಷಭ್ ಪಂತ್ ಅವರು ವಾಷಿಂಗ್ಟನ್ ಸುಂದರ್‌ಗೆ ಹಿಂದಿಯಲ್ಲಿ ನೀಡಿದ ಬೌಲಿಂಗ್ ಸಲಹೆ ವ್ಯರ್ಥವಾಯಿತು. ಕಿವೀಸ್ ಆಟಗಾರ ಅಜಾಜ್ ಪಟೇಲ್‌ಗೆ ಹಿಂದಿ ಬರುತ್ತದೆ ಎಂದು ತಿಳಿಯದೆ ನೀಡಿದ ಸಲಹೆಯಿಂದ ಸುಂದರ್ ಬೌಂಡರಿ ಬಿಟ್ಟುಕೊಡಬೇಕಾಯಿತು. ಈ ಘಟನೆಯ ಸಂಭಾಷಣೆ ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.