Siddaramaiah: ಸರ್.. ದಯವಿಟ್ಟು ನ್ಯಾಯ ಕೊಡ್ಸಿ.. ಸಿದ್ದರಾಮಯ್ಯ ಮುಂದೆ ಮಹಿಳೆಯ ಕಣ್ಣೀರು..!

ಸಿಎಂ ಸಿದ್ದರಾಮಯ್ಯ(Siddaramaiah) ಹುಬ್ಬಳ್ಳಿಗೆ ಭೇಟಿ ನೀಡಿದ ವೇಳೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಕಣ್ಣೀರು ಹಾಕಿದ್ದಾರೆ. ಮನವಿ ಸಲ್ಲಿಸೋ ವೇಳೆ ಸಿಎಂ ಮುಂದೆ ಕಣ್ಣೀರು ಹಾಕಿದ ಘಟನೆ ನಡೆದಿದೆ. ಭೂಮಿ ವಿಚಾರವಾಗಿ ಮನವಿ ಸಲ್ಲಿಸಲು ಬಂದಿದ್ದ ಸೈನಾಜ್ ದೊಡ್ಡಮನಿ ಎಂಬ ಮಹಿಳೆ ಕಣ್ಣೀರು ಹಾಕಿದ್ದಾರೆ. ಸೈನಾಜ್ ಕುಟುಂಬಸ್ಥರು ಬೊಮ್ಮಸಮುದ್ರದಲ್ಲಿ ಉಳುಮೆ ಮಾಡ್ತಿದ್ದ ಭೂಮಿ ಅರಣ್ಯ ಇಲಾಖೆಗೆ ಒಳಪಡುತ್ತೆ ಎಂದು ಅಧಿಕಾರಿಗಳು ದರ್ಪ ತೋರಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಬಳಿ ಮನವಿ ಕೊಡಲು‌ ಸೈನಾಜ್ ದೊಡ್ಡಮನಿ ಬಂದಿದ್ದರು. ಇದೇ ವೇಳೆ ಸಿಎಂ ಸಿದ್ದರಾಮಯ್ಯ ಧಾರವಾಡ ಜಿಲ್ಲಾಧಿಕಾರಿ ಗುರುದತ್ ಹೆಗಡೆಗೆ ಏನ್ ನೋಡಿ ಅಂದು ಹೇಳಿದರು. ಆಗ ನಮ್ಮ‌ ಭೂಮಿ ನಮಗೆ ಕೊಡ್ಸಿ ಎಂದು ಕಣ್ಣೀರು‌ಹಾಕಿದ ಘಟನೆ ನಡೆದಿದೆ.