ಬೆಂಗಳೂರಿನಲ್ಲಿ ಆರ್‌ಟಿಓ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಕಾರ್ಯಾಚಾರಣೆ ನಡೆಸಿದ್ದು, ನೂರಕ್ಕೂ ಹೆಚ್ಚು ಖಾಸಗಿ ಶಾಲಾ ಮತ್ತು ಕಾಲೇಜು ವಾಹನಗಳ ಜಪ್ತಿ ಮಾಡಿದ್ದಾರೆ. ಫಿಟ್ನೆಸ್ ಪ್ರಮಾಣಪತ್ರ, ಪರ್ಮಿಟ್, ತೆರಿಗೆ ಪಾವತಿ, ಚಾಲಕರ ಲೈಸೆನ್ಸ್ ನವೀಕರಣ ಮತ್ತು ವಿಮೆ ನವೀಕರಣದಂತಹ ನಿಯಮ ಉಲ್ಲಂಘನೆಗಳಿಗಾಗಿ ಈ ಕ್ರಮ ಕೈಗೊಳ್ಳಲಾಗಿದೆ.ಮಕ್ಕಳನ್ನು ಅಪಾಯಕಾರಿ ರೀತಿಯಲ್ಲಿ ಸಾಗಿಸುತ್ತಿದ್ದ ವಾಹನಗಳನ್ನು ಗುರುತಿಸಲಾಗಿದೆ.