ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನಕ್ಕೆ ಒಳಗಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ದರ್ಶನ್ ಭಾವ ಮಂಜುನಾಥ್ ದುಃಖಕ್ಕೆ ಒಳಗಾಗಿದ್ದಾರೆ. ಅವರು ಉತ್ತರ ಕನ್ನಡ ಜಿಲ್ಲೆ ಕಾರವಾರದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ‘ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನ ಆಗಿರುವುದು ಬೇಸರವಾಗುತ್ತಿದೆ. ಸಂಪಾದನೆ ಮಾಡುತ್ತಿದ್ದ ಮುಕ್ಕಾಲು ಭಾಗ ಸಮಾಜ ಸೇವೆಗೆ ಬಳಸಿದ್ದಾರೆ. ದರ್ಶನ್ ಶಾಂತವಾಗಿದ್ರೂ ಕಿರಿಕಿರಿ ಮಾಡಿ ದರ್ಶನ್ ಕೋಪ ಮಾಡಿಕೊಳ್ಳುವ ಹಾಗೆ ಮಾಡಲಾಗುತ್ತಿದೆ. ಕೊಲೆ ಪ್ರಕರಣಕ್ಕೆ ಪವಿತ್ರಾ ಗೌಡ ಕಾರಣ ಅಂತಾ ನಾನು ಹೇಳಲ್ಲ. ದರ್ಶನ್ ಆದಷ್ಟು ಬೇಗ ಪ್ರಕರಣದಿಂದ ಮುಕ್ತರಾಗಿ ಹೊರಬರಬೇಕು’ ಎಂದು ಅವರು ಕೋರಿದ್ದಾರೆ.