ರಕ್ಷಿತ್ ಶೆಟ್ಟಿ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ವಿಜಯ ಯಾತ್ರೆ ಮಾಡುತ್ತಿದ್ದಾರೆ. ಮೈಸೂರು, ಮಂಡ್ಯ, ಹಾಸನಕ್ಕೆ ಅವರು ಭೇಟಿ ನೀಡಿದ್ದರು. ಇತ್ತೀಚೆಗೆ ಅವರು ತಮ್ಮ ಹುಟ್ಟೂರು ಉಡುಪಿಗೆ ತೆರಳಿದ್ದಾರೆ. ಅಲ್ಲಿ ಅಭಿಮಾನಿಗಳ ಜೊತೆ ಅವರು ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಯಶಸ್ಸನ್ನು ಆಚರಿಸಿದ್ದಾರೆ. ಹುಲಿ ಕುಣಿತದಲ್ಲಿ ಭಾಗಿ ಆಗಿದ್ದಾರೆ. ವೇದಿಕೆ ಏರಿದ ಸಂದರ್ಭದಲ್ಲಿ ಅವರಿಗೆ ಒಂದು ವಿಶೇಷ ಬೇಡಿಕೆ ಬಂದಿದೆ. ‘ಮುಂದಿನ ವರ್ಷ ಬುರವಾಗ ಹೆಂಡ್ತಿ ಜೊತೆ ಬನ್ನಿ’ ಎಂದಿದ್ದಾರೆ ರಕ್ಷಿತ್.