ತನ್ನ ತಂದೆಯ ಬಗ್ಗೆ ಮಾತಾಡಿದ ರಮೇಶ್ ಬಿಧುರಿ ಹೇಳಿಕೆಗೆ ಕಣ್ಣೀರು ಹಾಕಿದ ಸಿಎಂ ಅತಿಶಿ

ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ರಮೇಶ್ ಬಿಧುರಿ ತಮ್ಮ ವಿರುದ್ಧ ಮಾಡಿದ ಹೇಳಿಕೆಗಳ ಕುರಿತು ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುವಾಗ ದೆಹಲಿ ಮುಖ್ಯಮಂತ್ರಿ ಅತಿಶಿ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ರಮೇಶ್ ಬಿಧುರಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅತಿಶಿ, ರಾಜಕೀಯವನ್ನು ಕೆಳಮಟ್ಟಕ್ಕಿಳಿಸಿರುವುದನ್ನು ಪ್ರಶ್ನಿಸಿದ್ದಾರೆ. ಅತಿಶಿ ವಿರುದ್ಧ ಸ್ಪರ್ಧಿಸಲಿರುವ ಕಲ್ಕಾಜಿಯ ಬಿಜೆಪಿ ಅಭ್ಯರ್ಥಿ ಬಿಧುರಿ ಅವರು ಎಎಪಿ ನಾಯಕಿ ಅತಿಶಿ ಅವರ ಸರ್​ನೇಮ್ ಬಗ್ಗೆ ನೀಡಿದ ಹೇಳಿಕೆಯ ಕಾರಣಕ್ಕೆ ವಿವಾದಕ್ಕೀಡಾಗಿದ್ದಾರೆ.