ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ನಲ್ಲಿ ನಡೆದ ಭೂಕಂಪದಲ್ಲಿ 1,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಇದೀಗ ಭೂಕಂಪಪೀಡಿತ ಮ್ಯಾನ್ಮಾರ್ಗೆ ಸಹಾಯ ಮಾಡಲು ಭಾರತ ಸರ್ಕಾರ ಆಪರೇಷನ್ ಬ್ರಹ್ಮ ಮೂಲಕ ಮೂಲಸೌಕರ್ಯದ ಕಿಟ್ ಮತ್ತು ಮೆಡಿಕಲ್ ಕಿಟ್ಗಳನ್ನು ನೀಡಿದೆ. ಮ್ಯಾನ್ಮಾರ್ಗೆ ಸಹಾಯಹಸ್ತ ಚಾಚಲು ಭಾರತ ಇದೇ ಹೆಸರನ್ನು ಏಕೆ ಆಯ್ಕೆ ಮಾಡಿತು? ಎಂಬ ಬಗ್ಗೆ ವಿದೇಶಾಂಗ ಸಚಿವಾಲಯ ನೀಡಿದ ವಿವರಣೆ ಇಲ್ಲಿದೆ. ಯಾವುದೇ ನೆರೆಯ ದೇಶಕ್ಕೆ ಯಾವುದೇ ವಿಪತ್ತು ಸಂಭವಿಸಿದಾಗ ಭಾರತವು ಮೊದಲು ಪ್ರತಿಕ್ರಿಯಿಸುತ್ತದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ಚಂಡಮಾರುತ ಅಪ್ಪಳಿಸಿದಾಗಲೂ ಮ್ಯಾನ್ಮಾರ್ ದೇಶಕ್ಕೆ ಭಾರತ ನೀಡಿದ ಸಹಕಾರವನ್ನು ಅವರು ಒತ್ತಿ ಹೇಳಿದರು. ಆ ಸಮಯದಲ್ಲಿ ಭಾರತವೂ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು.