ಹುಕ್ಕೇರಿ: ರಸ್ತೆ ಅಪಘಾತದಲ್ಲಿ ಮರಿ ಮಂಗ ಸಾವು, ತಾಯಿಯ ಆಕ್ರಂದನ

ತಾಯಿ ಮತ್ತು ಮಗು ಇಬ್ಬರೂ ಒಟ್ಟೊಟ್ಟಿಗೆ ಹೊರಟಿದ್ದರು. ಆದರೆ ರಸ್ತೆ ದಾಟುತ್ತಿದ್ದ ಮಂಗನಿಗೆ ಕಾರು ಡಿಕ್ಕಿಯಾಗಿದೆ. ಸ್ಥಳದಲ್ಲೇ ಮರಿ ಮಂಗ ಸಾವಿಗೀಡಾಗಿದ್ದು, ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಇದ ಕಂಡ ದಾರಿಹೋಕರ ಕರುಳು ಹಿಂಡುವಂತಾಗಿದೆ. ಅಪಘಾತ ಮಾಡಿದ (Road Accident) ಕಾರು ಚಾಲಕ ಎಸ್ಕೇಪ್ ಆಗಿಬಿಟ್ಟಿದ್ದಾನೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನೂ? ಸ್ಥಳೀಯರು (Localites) ಮತ್ತಿತರ ವಾಹನ ಸವಾರರಿಂದ ದೊಡ್ಡ ಮಂಗನ ರಕ್ಷಣೆ ಮಾಡಿ, ಮರಿ ಮಗನ (Baby Monkey) ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ... ರಸ್ತೆಯಲ್ಲಿ ಶವವಾಗಿ ಬಿದ್ದ ಪುಟ್ಟ ಮಂಗ, ಅದ ಕಂಡು ಶಾಕ್ ನಲ್ಲಿ ಹೆತ್ತ ತಾಯಿ ಮಂಗ, ಸ್ಥಳೀಯರಿಂದ ರಕ್ಷಣೆ ನೀರು ಕುಡಿಸಿ ಆರೈಕೆ. ಅಷ್ಟಕ್ಕೂ ಈ ಎಲ್ಲ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ನಿಡಸೋಸಿ ಕ್ರಾಸ್ ಹೊರ ವಲಯದಲ್ಲಿ (Hukkeri, Belagavi).