ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರ ಕಚೇರಿ ಮತ್ತು ನಿವಾಸವಾಗಿ ಕಾರ್ಯನಿರ್ವಹಿಸಲು ನಿರ್ಮಿಸಲಾದ ವೈಜಾಗ್‌ನ ರುಷಿಕೊಂಡ ಬೆಟ್ಟದ ಮೇಲೆ ಸಮುದ್ರಕ್ಕೆ ಎದುರಾಗಿರುವ ಭವ್ಯವಾದ ಬಂಗಲೆ ಈಗ ಚರ್ಚೆಯಲ್ಲಿದೆ. ಇದನ್ನು ಬರೋಬ್ಬರಿ 452 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಅರಮನೆಗೆ ಜಗನ್ ಪ್ಯಾಲೇಸ್ ಎಂದೇ ಕರೆಯಲಾಗ್ತಿದೆ. ಮನೆಯ ಪ್ರತಿಯೊಂದು ರೂಮ್, ಐಷಾರಾಮಿ ವಸ್ತುಗಳು ನಿಬ್ಬೆರಗಾಗಿಸುವಂತಿದೆ