ಕಿರಾಣಿ ಅಂಗಡಿ ಒಡತಿಯ ಮಾಂಗಲ್ಯ ದೋಚಿ ಎಸ್ಕೇಪ್ ಆದ ಐನಾತಿ

ಕರ್ನಾಟಕ ಮಹಾರಾಷ್ಟ್ರ (Maharashtra) ಗಡಿಯಲ್ಲಿ ಚೀಟಿ ತೋರಿಸಿ ಯಾಮಾರಿಸಿ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣ ವರದಿಯಾಗಿದೆ. ಕಿರಾಣಿ ಅಂಗಡಿಗೆ ಆಗಮಿಸಿದ ವ್ಯಕ್ತಿ ಒಂದು ಬಿಳಿ ಬಣ್ಣದ ಚೀಟಿ ತೋರಿಸುತ್ತಿದ್ದಂತೆ ಅಂಗಡಿ ಮಾಲಕಿ ತನ್ನ ಚಿನ್ನದ ಮಾಂಗಲ್ಯ (gold chain) ತೆಗೆದು ಆ ಚೀಟಿಯಲ್ಲಿ ಇಟ್ಟಿದ್ದಾಳೆ ಅಷ್ಟೇ. ಜಸ್ಟ್ ಎರಡೂವರೆ ನಿಮಿಷದಲ್ಲಿ ತನ್ನ ಕೈಚೆಳಕ ತೋರಿಸಿ ಚಿನ್ನದ ಸರದೊಂದಿಗೆ ಎಸ್ಕೇಪ್ ಆಗಿದ್ದಾನೆ. ಈ ಕುರಿತು ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ. ಹೌದು ಇದು ವಿಚಿತ್ರ ಅಂದರೂ ಸತ್ಯ. ಯುವಕನೊಬ್ಬ ಗುಟ್ಕಾ ಖರೀದಿಸುವ ನೆಪದಲ್ಲಿ ಕಿರಾಣಿ ಅಂಗಡಿಗೆ ಬಂದು ಬಳಿಕ ತೆಂಗಿನಕಾಯಿ, ಊದುಬತ್ತಿ ಖರೀದಿಸಿ ಚೀಟಿ ತೋರಿಸಿ ಮಹಿಳೆಯ ಚಿನ್ನದ ಮಾಂಗಲ್ಯದ ಜೊತೆ ಎಸ್ಕೇಪ್ (chain snaching) ಆಗಿದ್ದಾನೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ( chikkodi) ತಾಲೂಕಿನ ರುಪಿನಾಳ ಗ್ರಾಮದಲ್ಲಿ ಶನಿವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.