ಅವೈಜ್ಞಾನಿಕ ಕಾಮಗಾರಿಗಳಿಂದ ಕೃತಕ ಪ್ರವಾಹಗಳು ಉಂಟಾಗುತ್ತಿವೆ, ಗುಡ್ಡಕುಸಿತ ಉಂಟಾಗುತ್ತಿದೆ, ತೋಟ ಮತ್ತು ಹೊಲ-ಗದ್ದೆಗಳಲ್ಲಿ ನೀರು ಶೇಖರಗೊಳ್ಳುತ್ತಿದೆ-ಒಟ್ಟಿನಲ್ಲಿ ರೈತರು ಮತ್ತು ಜನಸಾಮಾನ್ಯ ತೀವ್ರ ಸಂಕಷ್ಟಕ್ಕೊಳಗಾಗುತ್ತಿದ್ದಾರೆ. ಪ್ರತಿ ಮಳೆಗಾಲದಲ್ಲಿ ಇದೇ ಪರಿಸ್ಥತಿ ನಿರ್ಮಾಣವಾಗುತ್ತಿದೆ. ಬೇಸಿಗೆ ಮತ್ತು ಚಳಿಗಾಲದಲ್ಲೇ ಸೂಕ್ತ ಪರಿಹಾರ ಕಂಡುಕೊಳ್ಳಲು ಸರ್ಕಾರಗಳಿಗೆ ಕಷ್ಟವಾಗುತ್ತಿದೆಯೇ?