ವೀರಪ್ಪ ಮೊಯ್ಲಿ, ಹಿರಿಯ ಕಾಂಗ್ರೆಸ್ ನಾಯಕ

ಟಿಕೆಟ್ ಸಿಕ್ಕಿಲ್ಲ ಅಂತ ತಮ್ಮ ಬೆಂಬಲಿಗರು ಬೇಸರ ಮಾಡಿಕೊಳ್ಳಬಾರದು, ರಾಷ್ಟ್ರೀಯ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ಯುವನಾಯಕ ರಕ್ಷಾರಾಮಯ್ಯ ಅವರ ಗೆಲುವಿಗೆ ಶ್ರಮಿಸಬೇಕು ಎಂದು ಮೊಯ್ಲಿ ಹೇಳಿದರು. ಮುಂದಿನ ದಿನಗಳಲ್ಲಿ ಸ್ಥಾನಮಾನ ಸಿಗುವ ಬಗ್ಗೆಯೂ ಯಾವ ನಿರೀಕ್ಷೆಯನ್ನೂ ಇಟ್ಟುಕೊಂಡಿಲ್ಲ, ಪಕ್ಷ ಈ ಮೊದಲು ಸಾಕಷ್ಟು ಸ್ಥಾನಮಾನ ನೀಡಿ ಗೌರವಿಸಿದೆ ಎಂದು ಅವರು ಹೇಳಿದರು.