‘ಬಿಗ್ ಬಾಸ್ ಕನ್ನಡ ಸೀಸನ್ 11’ ರಿಯಾಲಿಟಿ ಶೋನಲ್ಲಿ ಈಗ ಭಾವುಕ ಸಂಚಿಕೆಗಳು ಪ್ರಸಾರ ಆಗುತ್ತಿವೆ. ಬಿಗ್ ಬಾಸ್ ಸ್ಪರ್ಧಿಗಳ ಕುಟುಂಬದವರು ದೊಡ್ಮನೆಗೆ ಬರುತ್ತಿದ್ದಾರೆ. ಉಗ್ರಂ ಮಂಜು ತಂದೆ ಸಹ ಬಿಗ್ ಬಾಸ್ ಮನೆಗೆ ಬಂದಿದ್ದು, ಅವರನ್ನು ನೋಡಿ ಮಂಜು ಅತ್ತಿದ್ದಾರೆ. ಮಗನಿಗೆ ತಂದೆ ಧೈರ್ಯ ತುಂಬಿದ್ದಾರೆ. ಜ.1ರಂದು ಈ ಎಮೋಷನಲ್ ಎಪಿಸೋಡ್ ಪ್ರಸಾರ ಆಗಲಿದೆ.