ಬಳ್ಳಾರಿ ಅಂದಾಕ್ಷಣ ನೆನಪಾಗೋದೇ ಅಲ್ಲಿನ ಜೀನ್ಸ್ ಉದ್ಯಮ (Bellary Jeans Park), ಆ ಉದ್ಯಮಕ್ಕೆ ಉತ್ತೇಜನ ನೀಡಬೇಕು ಅಂತ ಅಲ್ಲಿನ ಜನ್ರು ಹಲವು ವರ್ಷಗಳಿಂದ ಸರ್ಕಾರಗಳಿಗೆ ಒತ್ತಾಯ ಮಾಡುತ್ತಾ ಬಂದಿದ್ದಾರೆ. ಆದ್ರೆ ಕೇವಲ ಭರವಸೆಗಳ ಮೇಲೆ ಭರವಸೆಗಳು ಅಭಿವೃದ್ಧಿ ಹೊಂದುತ್ತಿವೆಯೇ ಹೊರತು ವಾಸ್ತವದಲ್ಲಿ ಯಾವುದೂ ಪ್ರಗತಿಯಾಗಿಲ್ಲ. ಅದಕ್ಕೆ ಪೂರಕವಾಗುವಂತೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರು (Rahul Gandhi) ಜೀನ್ಸ್ ಅಪರಲ್ ಪಾರ್ಕ್ ನಿರ್ಮಾಣ ಮಾಡುತ್ತೇವೆ ಅಂತಾ ಭರವಸೆ ಕೊಟ್ಟಿದ್ದರು. ಅದು ಕೂಡ ಭರವಸೆಯಾಗಿ ಉಳಿಯುವ ಲಕ್ಷಣ ಎದ್ದು ಕಾಣುತ್ತಿದೆ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ (Siddaramaiah).