ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆಯ ಸಾರ್ವಜನಿಕ ದರ್ಶನಕ್ಕೆ ಇಂದು ಭವ್ಯ ಚಾಲನೆ ಸಿಕ್ಕಿದೆ. ಜೊತೆಗೆ ಆಗಸದಿಂದ ಹಾಸನ ಯೋಜನೆಯ ಹೆಲಿ ಟೂರಿಸಂಗೂ ಕೂಡ ಚಾಲನೆ ನೀಡಲಾಗಿದೆ. ಹೆಲಿಕಾಪ್ಟರ್ನಲ್ಲಿ ಹಾರಾಟ ನಡೆಸುವ ಮೂಲಕ ಡಿಸಿ ಸಿ ಸತ್ಯಭಾಮ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.