ಬಿಳಿ ಸೀರೆಯುಟ್ಟು, ಚಪ್ಪಲಿ ಧರಿಸಿ ಲಂಡನ್​ನ ಪಾರ್ಕ್​ನಲ್ಲಿ ಮಮತಾ ಬ್ಯಾನರ್ಜಿ ಜಾಗಿಂಗ್

ಬಿಳಿ ಸೀರೆಯುಟ್ಟು ಚಪ್ಪಲಿ ಧರಿಸಿ ಲಂಡನ್​ನ ಹೈಡ್ರಾ ಪಾರ್ಕ್​ನಲ್ಲಿ ಜಾಗಿಂಗ್​ ಮಾಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಲಂಡನ್​ಗೆ ತೆರಳಿದ್ದರೂ ಕೂಡ ತಮ್ಮ ಸಾಂಪ್ರದಾಯಿಕ ಉಡುಪನ್ನು ಬಿಟ್ಟು ಬೇರೆ ತೊಟ್ಟಿಲ್ಲ, ಅದೇ ಸೀರೆ ಮೇಲೆ ಜಾಕೆಟ್ ಧರಿಸಿ, ಚಪ್ಪಲಿ ಹಾಕಿಕೊಂಡು ಜಾಗಿಂಗ್ ಹೋಗಿದ್ದಾರೆ. ಅವರೇ ತಮ್ಮ ವಿಡಿಯೋ ಹಂಚಿಕೊಂಡಿದ್ದಾರೆ.ಬಂಗಾಳ ಮತ್ತು ಬ್ರಿಟನ್ ಶತಮಾನಗಳಷ್ಟು ಹಳೆಯ ಸಂಬಂಧವನ್ನು ಹೊಂದಿವೆ.