ಸಿರಾಜ್ ಜೊತೆಗಿನ ಜಗಳದ ಬಗ್ಗೆ ಮೌನ ಮುರಿದ ಹೆಡ್

ನಾನು ಸಿರಾಜ್​ಗೆ ವೆಲ್ ಬೌಲ್ಡ್ (ಉತ್ತಮ ಎಸೆತ) ಎಂದು ಹೇಳಿದೆ. ಆದರೆ ಆ ಸಂದರ್ಭದಲ್ಲಿ ಸಿರಾಜ್ ಅದನ್ನು ತಪ್ಪಾಗಿ ಅರ್ಥೈಸಿಕೊಂಡರು. ನಾನು ಸಿರಾಜ್​ಗೆ ಬೇರೇ ಏನನ್ನೋ ಹೇಳಿದ್ದೇನೆ ಎಂದು ತಿಳಿದುಕೊಂಡು ನನ್ನನ್ನು ಪೆವಿಲಿಯನ್​ಗೆ ಹೋಗು ಎಂದು ಆಕ್ರೋಶದಿಂದ ಹೇಳಿದರು.